Pavitra daara – pure silk 1 Nos

1 customer review

₹200.00

Please note: 1 Nos
Bate matirial: Pure Silk. 
Production (Hand Crafted) by Vid Skanda Kumar Udupi. Sudha Vidwan by Sri Palimaru Matha (Acharya Contact number 8105257973)
108 silk thread 

Out of stock

Join the waitlist to be emailed when this product becomes available

SKU: MDKSK002 Category:

ಪವಿತ್ರಾರೋಪಣೆ

ನಾವು ದಿನನಿತ್ಯ ದೇವರ ಪೂಜೆ ಮಾಡುತ್ತೇವೆ. ಆದರೆ ಅದರಲ್ಲಿ ಹಲವಾರು ಲೋಪ ದೋಷಗಳು ಇರುತ್ತವೆ. ಭಗವಂತ ದೋಷವನ್ನೂ ಗಣನೆ ಮಾಡಿದರೆ ನಮಗೆ ದೇವರ ಪೂಜೆಯಿಂದ ಪುಣ್ಯ ಬರುತ್ತದೋ, ಇಲ್ಲವೋ ಎಂದು ಯೋಚಿಸಬೇಕಾಗುತ್ತದೆ. ಆದರೂ ನಾವು ಪೂಜೆಯನ್ನು ಬಿಡಬಾರದು ಎಂಬ ಉದ್ದೇಶದಿಂದ ಶಾಸ್ತ್ರಕಾರರು ಕೆಲವು ವಿಧಿ – ವಿಧಾನವನ್ನು ಕಂಡುಕೊಂಡು ನಮಗೆ ನೀಡಿ ಮಹದುಪಕಾರವನ್ನು ಮಾಡಿದ್ದಾರೆ.
ಅದರಲ್ಲಿ ಒಂದು ಈ ಪವಿತ್ರಾರೋಪಣೆ.

ಈ ಪವಿತ್ರಾರೋಪಣೆ ಎಂದರೆ ಹತ್ತಿ, ಅಥವಾ ರೇಷ್ಮೆಯ ದಾರವನ್ನು ತಂದು ಅದನ್ನು ಶುದ್ಧಿಮಾಡಿ ಅದನ್ನು ಶಾಸ್ತ್ರದಲ್ಲಿ ಹೇಳಿದ ರೀತಿಯಲ್ಲಿ 108 ಬಾರಿ ಸುತ್ತಿ ನಂತರ ಅದಕ್ಕೆ ದಾರದ ಉದ್ದಕ್ಕೆ ಸಮವಾಗಿ ಪವಿತ್ರಗ್ರಂಥಿಯನ್ನು ಹಾಕಬೇಕು. ಇದನ್ನು ಪವಿತ್ರದಾರ ಎನ್ನುತ್ತಾರೆ.ಇದನ್ನು ದೇವರಿಗೆ ಅರ್ಪಿಸಬೇಕು. ಇದಕ್ಕೂ ಇನ್ನೂ ಅನೇಕ ಕ್ರಮಗಳಿವೆ. ಇದಕ್ಕೆ ಇದರದ್ದೇ ಆದ ಹೋಮಗಳ ಪ್ರಕ್ರಿಯೆಯನ್ನು ಶಾಸ್ತ್ರಗಳಲ್ಲಿ ಉಲ್ಲೇಖಸಲಾಗಿದೆ. ತದನಂತರ ಇದನ್ನು ಇದಂ ವಿಷ್ಣು: ಎಂಬ ವಿಷ್ಣುಸೂಕ್ತದಿಂದ ಅಥವಾ ಪುರುಷಸೂಕ್ತದಿಂದ ದೇವರಿಗೆ ಅರ್ಪಿಸಬೇಕು. ಈಗ ಇಷ್ಟೆಲ್ಲಾ ಕ್ರಮಗಳ ಆಚರಣೆ ನಾನಂತೂ ಎಲ್ಲೂ ನೋಡಿಲ್ಲ. ಶಾಸ್ತ್ರದಲ್ಲಿ ಹೇಳಿದ ಕ್ರಮದಲ್ಲಿ ಮಾಡಲು ತುಂಬಾ ಕಷ್ಟಕರ ಹಾಗಾಗಿ ಈಗ ಬರೇ ದಾರವನ್ನು 108 ಬಾರಿ ಸುತ್ತಿ ಅದಕ್ಕೆ ಪವಿತ್ರಗ್ರಂಥಿಯನ್ನು ಹಾಕಿ ಪವಿತ್ರದಾರವನ್ನು ಮಾಡಿ ದೇವರಿಗೆ ಅರ್ಪಿಸಿ, ನಾವೂ ಹಾಕಿಕೊಳ್ಳುವುದನ್ನು ನೋಡುತ್ತೇವೆ.

ಈಗಿನ ಕಾಲದಲ್ಲಿ ಮಠಗಳಲ್ಲಿ ಈ ಕ್ರಮ ಹೆಚ್ಚಾಗಿ ಕಾಣಬಹುದು. ಆದರೆ ಇದು ಮಠಗಳಿಗೆ ಮಾತ್ರ ಸೀಮಿತವಾಗದೆ ನಾವು ನಿತ್ಯ ಮನೆಗಳಲ್ಲಿ ಆರಾಧಿಸುವ ದೇವರಿಗೂ ಅರ್ಪಿಸುವ ಹಾಗೆ ಆಗಬೇಕು.

ಇನ್ನು ಕಾಲದ ವಿಚಾರ ಬಂದರೆ ಈಗ ಶ್ರಾವಣ ಶುಕ್ಲ ದ್ವಾದಶಿಯಂದು ದೇವರಿಗೆ ಅರ್ಪಿಸಿ ಅನಂತರ ಪೂರ್ಣಮೀಯಂದು ಹಯಗ್ರೀವ ಜಯಂತಿಯ ಪರ್ವಕಾಲದಲ್ಲಿ ನಾವು ಧರಿಸುವ ಪದ್ಧತಿ ಅನೂಚನವಾಗಿ ಬಂದ ಸತ್ಸಂಪ್ರದಾಯವಾಗಿದೆ.

ಆದರೆ ಭಾರ್ಗವತಂತ್ರ ಹಾಗೂ ಪುರಾಣಗಳ ಪ್ರಕಾರ ಕೆಳಗಿನ 3 ಮಾಸಗಳಲ್ಲಿ ಶುಭವಾದ ತಿಥಿ, ನಕ್ಷತ್ರಗಳಲ್ಲಿ ದೇವರಿಗೆ ಅರ್ಪಿಸಬಹುದು.

श्रावणे भाद्रपद्यां वा मासि वाश्वयुजे भवेत् । शोभने तिथिनक्षत्रे वासरे शुभनन्दिते ||

पवित्रभूषणं कुर्यात् कल्याणं कमलापतेः । अश्विन्योः श्रवणे पुष्ये रोहिण्यां वा पुनर्वसौ ||

उत्तरत्रितये स्वातौ मृगे मैत्रेऽन्त्यमेऽपि वा । कुर्यात् पवित्रं कल्याणं यथाविधि मुनीश्वर ||

ಇದು ಭಾರ್ಗವತಂತ್ರದಲ್ಲಿ ಅಗಸ್ತ್ಯರು ಕೇಳಿದ ಪ್ರಶ್ನೆಗೆ ಶ್ರೀರಾಮನ ಉತ್ತರವಾಗಿರುತ್ತದೆ.

ಇದನ್ನು ದೇವರಿಗೆ ಅರ್ಪಿಸಿ ನಂತರ ಪ್ರಾರ್ಥನೆ ಮಾಡಬೇಕು

भगवन्‌ देवदेवेश सर्वलोकनमस्कृतः । संवत्सरोपचारेषु न्यूनाधिक्योपशान्तये
आराधनमिदं भक्त्या…..||

ಲೋಕದಲ್ಲಿರುವ ಎಲ್ಲರಿಂದ ನಮಸ್ಕೃತನಾದ, ದೇವತೆಗಳಿಗೆ ದೇವರಾದ ಭಗವಂತನೇ ಸಂವತ್ಸರಗಳಲ್ಲಿ ಮಾಡಿದ ಉಪಚಾರ ಪೂಜೆಯಲ್ಲಿ ಮಾಡಿದ ಪಾಪದ ಪರಿಹಾರಕ್ಕಾಗಿ ಈ ಪವಿತ್ರಾರೋಪಣೆ ಎಂಬ ವಿಧಿಯನ್ನು ಭಕ್ತಿಯಿಂದ ಮಾಡಬೇಕು. ( ಭಾರ್ಗವತಂತ್ರ )

इत्येष कथितो ब्रह्मन्‌ पवित्रारोहणो विधिः | एवं यः कुरते भक्त्या स याति परमां गतिम्‌ ||

ಈ ರೀತಿಯಾಗಿ ಯಾರು ಈ ವಿಧಿಯನ್ನು ಆಚರಿಸುತ್ತಾರೋ ಅವರು ಉತ್ತಮವಾದ ಲೋಕವನ್ನು ಹೊಂದುತ್ತಾರೆ. ( ಭಾರ್ಗವತಂತ್ರ )

ಇಷ್ಟಲ್ಲದೇ ಇನ್ನು ಈ ದಾರವನ್ನು ದೇವರಿಗೆ ಅರ್ಪಿಸಿ ಬಳಿಕ ಧಾರಣೆಮಾಡುವುದರಿಂದ ಎಲ್ಲಾ ವಿಧವಾದ ರಕ್ಷಣೆಗೂ ಕಾರಣವಾಗುತ್ತದೆ. ಹಾಗೂ ಇದನ್ನು ಆಶೌಚ ಇತ್ಯಾದಿ ಮಲಿನ ಸಮಯದಲ್ಲಿ ಧರಿಸಿದರೆ ನದಿ ಇತ್ಯಾದಿಗಳಲ್ಲಿ ವಿಸರ್ಜನೆ ಮಾಡಿದರೆ ಉತ್ತಮ ಎಂದು ನನ್ನ ಅಭಿಪ್ರಾಯ.

Customer reviews
3.00
1 ratings
5 Star
0%
4 Star
0%
3 Star
100%
2 Star
0%
1 Star
0%
1 review for Pavitra daara – pure silk 1 Nos
  • (verified owner)

    3 out of 5

    I ordered and got three pavitras I am not sure why they are of different size for the same cost

    • It is hand made. size some minor diffrent to one to one. But it is weable to all age

Write a customer review
Add a review