ಜಗದ್ಗುರು ಶ್ರೀಮಧ್ವಾಚಾರ್ಯ ಮೂಲ ಮಹಾಸಂಸ್ಥಾನದಲ್ಲಿ ಮಂತ್ರಾಲಯ ಪ್ರಭುಗಳ ಪ್ರಸ್ತುತ ಪೀಠದಲ್ಲಿ ವಿರಾಜಮಾನರಾಗಿರುಂತಹ ೧೦೦೮ ಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳವರ ವೇದಾಂತ ಸಾಮ್ರಾಜ್ಯದ ಪಂಚಮ ವರ್ಷದ ಪೀಠಾರೋಹಣ ಕಾರ್ಯಕ್ರಮದ
ಈ ಸಂದರ್ಭದಲ್ಲಿ ಶ್ರೀನಾರಾಯಣಪಂಡಿತಾಚಾರ್ಯರು ರಚಿರುವ ಅಣುಮಧ್ವವಿಜಯೆಂಬ ೩೨ ಮೂಲ ಶ್ಲೋಕಗಳುಳ್ಳ ಕಾವ್ಯಕ್ಕೆ ಶ್ರೀವಿಜಯದಾಸರ ಸಾಕ್ಷಾತ್ ಶಿಷ್ಯರಾದ ಶ್ರೀವರದಸುಂದರವೆಂಕಟ ದಾಸರು ಪ್ರತಿಯೊಂದು ಶ್ಲೋಕಕ್ಕು ೨ ಭಾಮಿನಿ ಷಟ್ಪದಿಗಳಂತೆ ಎರಡು ಪದ್ಯಗಳನ್ನು ರಚಿಸುವ ಕ್ರಮದಲ್ಲಿ ೩೨ ಶ್ಲೋಕಕ್ಕೆ ಒಟ್ಟು ೬೪ ಶ್ಲೋಕಗಳು ರಚನೆಯಾಗಿರುವ ಕೇವಲ ಮೂಲ ಶ್ಲೋಕಗಳ ಕಾವ್ಯವನ್ನು ಶ್ರೀವರದೇಂದ್ರ ಹರಿದಾಸ ಸಾಹಿತ್ಯ ಮಂಡಲದಿಂದ ೧೯೪೩ರಲ್ಲಿ ಶ್ರೀಸುಂದರವಿಠ್ಟಲರು ಪ್ರಕಟಿಸಿದ್ದರು. ಈ ಎಲ್ಲಾ ಮೂಲ ಶ್ಲೋಕಕ್ಕು ಪದಚ್ಛೇದ, ಅನ್ವಯ, ಅನ್ವಯಾರ್ಥ, ಭಾಮಿನಿ ಷಟ್ಪದಿಗಳ ಪದ್ಯಕ್ಕೆ ಪ್ರತಿಪದಾರ್ಥ, ಅದರ ವಿಸ್ತಾರ ರೂಪವಾದ ಭಾವಾರ್ಥವನ್ನು ಶ್ರೀಸುಂದರವಿಠ್ಠಲ ಪ್ರಕಾಶನದಿಂದ ಅನುವಾದಿಸಲ್ಪಟ್ಟದ್ದನ್ನು ಶ್ರೀಗುರುಸಾರ್ವಭೌಮ ಸಂಶೋಧನಾ ಮಂದಿರದಿಂದ ಪ್ರಕಟವಾದ ಕೃತಿಯು ಶ್ರೀಪಾದಂಗಳವರ ಅಮೃತ ಹಸ್ತದಿಂದ ಅನಾವರಣಗೊಂಡಿತು
Customer reviews
Reviews
There are no reviews yet.
Write a customer review